×

ADK CREATIVE's video: Tulu Devotional Song Manda Manikya Koragajja bhoomin therinaye swami koragajja

@Tulu Devotional Song | Manda Manikya Koragajja | bhoomin therinaye swami koragajja
ತುಳುನಾಡಿನ ಮಟ್ಟಿಗೆ ಆ ಹೆಸರೇ ಒಂದು ಕಾರ್ಣಿಕ ಶಕ್ತಿ. ಭಕ್ತಿಯಿಂದ ಆ ಹೆಸರು ಕೂಗಿದರೆ ಎಂಥಾ ಸಂಕಷ್ಟಕ್ಕೂ ಕ್ಷಣಾರ್ಧದಲ್ಲಿ ಪರಿಹಾರ ಸಿಕ್ಕ ಉದಾಹರಣೆಯಿದೆ. ಅದರಲ್ಲೂ ಎಷ್ಟೇ ಬೆಳೆಬಾಳುವ ವಸ್ತುಗಳು ಕಳೆದು ಹೋದರೂ ದಿಕ್ಕೇ ತೋಚದ ಲಕ್ಷಾಂತರ ಜನ ಮೊದಲು ಕರೆಯುವುದೇ ಆ ದೈವದ ಹೆಸರು. ಶತಶತಮಾನಗಳಿಂದಲೂ ತುಳುನಾಡಿನಲ್ಲಿ ದೈವೀ ಶಕ್ತಿಯ ದರ್ಶನ ಮಾಡಿಸುತ್ತಿರುವ ಆ ನಂಬಿಕೆಯ ದೈವವೇ ಸ್ವಾಮಿ ಕೊರಗಜ್ಜ. ತುಳುನಾಡಿನ ಅದೆಷ್ಟೋ ಜನ ಇಂದಿಗೂ ತಮ್ಮ ವಸ್ತುಗಳು ಕಾಣೆಯಾದರೆ‌ ಮೊದಲ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತುವುದಿಲ್ಲ. ಬದಲಾಗಿ ತಾವಿದ್ದ ಜಾಗದಲ್ಲೇ ಕಾರ್ಣಿಕ ಪುರುಷ ಕೊರಗಜ್ಜನ ನೆನೆದು ಭಕ್ತಿಯಿಂದ ಪ್ರಾರ್ಥಿಸಿಕೊಳ್ಳುತ್ತಾರೆ. ಇಷ್ಟಾದರೆ ಸಾಕು ತಾವು ಕಳೆದುಕೊಂಡ ವಸ್ತುಗಳು ಮತ್ತೆ ಕೈ ಸೇರುವುದು ಸೂರ್ಯನಷ್ಟೇ ಸತ್ಯ ಎನ್ನುವುದು ಕೊರಗಜ್ಜನ ಭಕ್ತರ ನಂಬಿಕೆಯ ನುಡಿ. ಇನ್ನು ಕಷ್ಟಗಳು ಎದುರಾದಗಲೂ ಭಕ್ತ ವಲಯ ಕೊರಗಜ್ಜನ ಹೆಸರು ಕೂಗಿದರೆ ಸಾಕು ಕಷ್ಟಗಳೆಲ್ಲಾ ಕಣ್ಣು ಮುಚ್ಚಿ ತೆಗೆಯುವುದರೊಳಗೆ ಮಾಯವಾಗುತ್ತದೆ ಎನ್ನುವ ಅಚಲ ನಂಬಿಕೆಯೂ ಇದೆ. ಇದೇ ಕಾರಣಕ್ಕೆ ತುಳುನಾಡಿನ ಆರಾಧ್ಯ ದೈವವಾಗಿ “ಕೊರಗಜ್ಜ’ ಎಂದು ಕರೆಯಲ್ಪಡುವ ಕೊರಗ ತನಿಯನನ್ನು ಶ್ರದ್ಧಾ ಭಕ್ತಿಯಿಂದ ಆರಾಧಿಸಲಾಗುತ್ತಿದ್ದು, ಧರ್ಮ ಮತ್ತು ಸತ್ಯದ ಪ್ರತೀಕವಾಗಿ ನಂಬಿದವರಿಗೆ ಇಂಬು ಕೊಡುವ ಧರ್ಮದೈವವಾಗಿ ಕೊರಗಜ್ಜ ತುಳುನಾಡಿನಲ್ಲಿ ನೆಲೆ ನಿಂತಿದ್ದಾನೆ.(ತುಳುನಾಡಿನಲ್ಲಿ ದೈವಗಳನ್ನು ಪ್ರೀತಿಯಿಂದ ಏಕವಚನದಲ್ಲಿ ಕರೆಯುದಿದೆ). ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕೊರಗಜ್ಜನ ಪವಾಡಗಳು ಇಂದಿಗೂ ನಡೆಯುತ್ತಿದ್ದು, ಅನೇಕ ಉದಾಹರಣೆಗಳು ಕಾಣಸಿಗುತ್ತದೆ. ಕೊರಗಜ್ಜ ಸಮಾನತೆ ಸಾರುವ ದೈವವಾಗಿ ಎಲ್ಲ ಜಾತಿ ಹಾಗೂ ಧರ್ಮದ ಜನರು ಅಜ್ಜ ಎಂದು ನಂಬಿಕೊಂಡು ಬಂದಿದ್ದಾರೆ. ಸಾಮಾಜಿಕ ನ್ಯಾಯದ ಪ್ರತೀಕವಾಗಿ ಆರಾಧಿಸುವ ಕೊರಗಜ್ಜನನ್ನು ತುಳುನಾಡಿನ ಪ್ರತಿಯೊಂದು ಜಾತಿ ಧರ್ಮದ ಜನರು ನಂಬಿಕೊಂಡು ಬಂದಿದ್ದಾರೆ. ತುಳುನಾಡಿನ ದೈವರಾಧನೆಯ ಒಂದು ಭಾಗವಾಗಿ ಕೊರಗಜ್ಜನ ಆರಾಧನೆಯನ್ನು ಮಾಡಲಾಗುತ್ತದೆ. ಕೊರಗಜ್ಜನ ಮೂಲಸ್ಥಾನ ಕುತ್ತಾರಿನಲ್ಲಿದ್ದರೂ ಕೂಡ ಅವಳಿ ಜಿಲ್ಲೆಗಳಾದ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ನಂಬಲಾಗುತ್ತಿದ್ದು, ಆಚರಣೆಗಳು ಮಾತ್ರ ಸ್ಥಳದಿಂದ ಸ್ಥಳಕ್ಕೆ ಬದಲಾಗುತ್ತಿದೆ. ಕಳೆದು ಹೋದ ವಸ್ತು ಮತ್ತೆ ಸಿಗುತ್ತದೆ! ಮಾನವನ ರೂಪದಲ್ಲಿ ಇದ್ದ ಕೊರಗತನಿಯ ಮಾಯಾ ರೂಪವನ್ನು ಪಡೆದು ದೈವೀ ಪುರುಷನಾಗುತ್ತಾನೆ ಎಂಬ ಪ್ರತೀತಿ ಇದೆ. ಹಾಗಾಗಿ ಮನುಷ್ಯರು ತಿನ್ನುವ ವಸ್ತುಗಳನ್ನೇ ಹರಕೆಯ ರೂಪದಲ್ಲಿ ಅಜ್ಜನಿಗೆ ನೀಡಲಾಗುತ್ತದೆ. ಉದಾಹರಣೆಗೆ ವೀಳ್ಯದೆಲೆ, ಅಡಿಕೆ ಸುಣ್ಣ, ತಂಬಾಕು, ಬೀಡಿ, ಶೇಂದಿ, ಚಕ್ಕುಲಿ, ಮದ್ಯ ಹೆಚ್ಚಾಗಿ ಹರಕೆಯಾಗಿ ನೀಡಲಾಗುತ್ತದೆ. ಅಮೂಲ್ಯವಾದ ಅಥವಾ ಯಾವುದೇ ಸಣ್ಣ ವಸ್ತು ಕಳೆದು ಹೋದರೂ ಅಜ್ಜನನ್ನು ಮನಸ್ಸಿನಲ್ಲಿ ನೆನೆದು ಹರಕೆಯನ್ನು ಹೇಳಿದರೆ ಸಾಕು ಆ ವಸ್ತು ಮತ್ತೆ ಕೈ ಸೇರಿದ ಅನೇಕ ಉದಾಹರಣೆಗಳು ಇದೆ ಎಂಬ ಬಲವಾದ ನಂಬಿಕೆ ಇಂದಿಗೂ ಕೂಡ ತುಳುನಾಡಿನ ಜನರಲ್ಲಿ ಇದೆ. ಯಾವುದರಲ್ಲೂ ಭಕ್ತಿ ಮುಖ್ಯವಾಗಿ ಬೇಕಾಗುತ್ತದೆ. ಯಾವುದೇ ಜಾಗದಲ್ಲಿ ನಿಂತು ಮನಸಾರೆ `ಅಜ್ಜ’ ಎಂದು ಕರೆದರೆ ನಾವಿದ್ದ ಜಾಗಕ್ಕೆ ಅಜ್ಜ ಬರುತ್ತಾನೆ ಎಂಬುವುದು ಭಕ್ತರ ನಂಬಿಕೆ ಏಳು ಕಲ್ಲಿನಲ್ಲಿ ಪೂಜಿಸಲ್ಪಡುವ ಕೊರಗಜ್ಜ! ಹೊರ ರಾಜ್ಯದ ಅರಸು ದೈವಗಳು ಕುತ್ತಾರು ಪ್ರದೇಶದ ಮೂಲ ದೈವಗಳಾದ ಪಂಜಂದಾಯ ಹಾಗೂ ಬಂಟ ದೈವಗಳ ಜಾಗದಲ್ಲಿ ಬಂದು ಕುಳಿತುಕೊಳ್ಳುತ್ತಾರೆ. ಆ ಸಂದರ್ಭದಲ್ಲಿ ಕೊರಗತನಿಯಲ್ಲಿ ಬಂದ ಅರಸು ದೈವಗಳನ್ನು ಹೇಗಾದರೂ ಓಡಿಸುವಂತೆ ಕೇಳಿಕೊಳ್ಳುತ್ತಾರೆ. ಆಗ ಕೊರಗತನಿಯ(ಕೊರಗಜ್ಜ) ನಾನು ಅವರನ್ನು ಓಡಿಸಿದರೆ ನನಗೇನು ಕೊಡುತ್ತಿರಿ ಎಂದು ಕೇಳಿದಾಗ ತುಳುನಾಡಿನ ಪ್ರತಿಯೊಬ್ಬರು ನಿನ್ನನ್ನು ಆರಾಧಿಸುವಂತೆ, ಮನೆ ಮನೆಯಲ್ಲಿ ಅಗೆಲು ಹಾಗೂ ಕೋಲ ಸೇವೆ ನಿನಗೆ ನೀಡುವಂತೆ ಹಾಗೂ ಈ ಪ್ರದೇಶದ ಏಳು ಕಲ್ಲಿನಲ್ಲಿ ನಿನ್ನನ್ನು ಪೂಜಿಸಲಾಗುತ್ತದೆ ಎಂಬ ಆಭಯವನ್ನು ನೀಡುತ್ತಾರೆ. ದೈವಗಳ ಮಾತಿನ ನಂತರ ಕೊರಗ ತನಿಯ ದನದ ರಕ್ತವನ್ನು ಚೆಲ್ಲುತ್ತಾ ಅರಸು ದೈವಗಳನ್ನು ಓಡಿಸುತ್ತಾರೆ. ಮುಂದೆ ಡೆಕ್ಕಾರು ಕಲ್ಲು, ಬೊಳ್ಯಕಲ್ಲು(ರಾಣಿಪುರ), ಕಲ್ಲಾಪಿನಲ್ಲಿ, ಮುನ್ನೂರು ಗ್ರಾಮದಲ್ಲಿ, ಸೋಮೇಶ್ವರ ಕಲ್ಲು(ಯೆನೆಪೋಯ ಮೆಡಿಕಲ್ ಕಲೇಜು ಬಳಿ), ದೇರಳಕಟ್ಟೆ ಬಳಿಯ ಕಲ್ಲು ಹಾಗೂ ಕುತ್ತಾರು ಮೂಲಸ್ಥಾನದ ಕಲ್ಲು ಸೇರಿದಂತೆ ಏಳು ಕಡೆಗಳಲ್ಲಿ ಏಳು ಕಲ್ಲಿನಲ್ಲಿ ಕೊರಗಜ್ಜನನ್ನು ಶ್ರದ್ಧೆ ಭಕ್ತಿಯಿಂದ ಪೂಜಿಸಲಾಗುತ್ತದೆ ಎಂದು ಪಾಡ್ದನ ಕಥೆಯಲ್ಲಿ ಹೇಳಲಾಗುತ್ತಿದೆ. ರಾತ್ರಿ ಹೊತ್ತು ಬೆಳಕು ಹಾಕುವಂತಿಲ್ಲ! ಕೊರಗಜ್ಜನ ಭಕ್ತರು ಕುತ್ತಾರು ಅಜ್ಜನ ಕಟ್ಟೆಯ ಬಳಿ ರಾತ್ರಿ ಹೊತ್ತಿನಲ್ಲಿ ವಾಹನ ಚಲಾಯಿಸುವಾಗ ವಾಹನದ ಹೆಡ್‍ಲೈಟ್ ಹಾಕುವುದಿಲ್ಲ. ಇಲ್ಲಿ ಕೋಲ ನಡೆಯುವ ಸಂದರ್ಭದಲ್ಲಿ ಅಗರಬತ್ತಿಯ ಬೆಳಕು ಕೂಡ ಕಾಣಬಾರದು ಎಂಬ ನಿಯಮವಿದೆ. ಅನಾದಿಕಾಲದಿಂದಲೂ ಇದನ್ನು ಅನುಸರಿಸಿಕೊಂಡು ಬರಲಾಗುತ್ತಿದ್ದು. ಅಜ್ಜನ ಬಗೆಗಿನ ಮೂಲ ಸಂಸ್ಕ್ರತಿಯನ್ನು ಉಳಿಸುವ ನಿಟ್ಟಿನಲ್ಲಿ ಇಂದಿಗೂ ಕೂಡ ಅಜ್ಜನ ಅಗೇಲು ಸೇವೆ ಹಾಗೂ ಕೋಲ ಸೇವೆ ನಡೆಯುವ ಸಂದರ್ಭದಲ್ಲಿ ದೀಪ ಹಚ್ಚುವಂತಿಲ್ಲ, ಯಾವುದೇ ಬೆಳಕು ಹಾಕುವಂತಿಲ್ಲ. ಈ ಭಾಗದಲ್ಲಿ ರಾತ್ರಿ ಹೊತ್ತು ಸಂಚರಿಸುವ ಬಹುತೇಕ ಎಲ್ಲ ವಾಹನಗಳು ಹೆಡ್‍ಲೈಟ್ ಒಮ್ಮೆ ಡಿಮ್ ಡಿಪ್ ಮಾಡಿ ಹೋಗುತ್ತಾರೆ. ಈ ಹಿಂದೆ ಅನ್ಯ ಧರ್ಮದ ಯಾವುದೋ ಕಾರ್ಯಕ್ರಮದ ಸಂದರ್ಭ ಈ ಭಾಗದಲ್ಲಿ ಗ್ಯಾಸ್ಲೈಟ್ ಹಿಡಿದುಕೊಂಡು ಈ ಭಾಗದಲ್ಲಿ ಹೋಗುತ್ತಾರಂತೆ. ಈ ವೇಳೆ ಸ್ಥಳೀಯರು ಅಜ್ಜನ ಕಟ್ಟೆಯ ಬಳಿಯಲ್ಲಿ ಬೆಳಕನ್ನು ಹಾಕಬಾರದು ಎಂದು ಅವರಿಗೆ ಸಲಹೆ ನೀಡುತ್ತಾರಂತೆ. ಆದರೂ ಅದನ್ನು ಲೆಕ್ಕಿಸದೇ ಮುಂದೆ ನಡೆದ ಸಂದರ್ಭ ಅಲ್ಲಿಂದ ಮುಂದೆ ಸಾಗುವಾಗಲೇ ಆ ಮೂರು ಗ್ಯಾಸ್‍ಲೈಟ್‍ಗಳು ಪುಡಿಯಾಗುತ್ತದಂತೆ. ಅಷ್ಟೇ ಅಲ್ಲದೇ ಅವರು ಎಷ್ಟು ನಡೆದರೂ ಸಹ ಅವರು ಮುಟ್ಟಬೇಕಾದ ಸ್ಥಳ ಸಿಗುವುದಿಲ್ಲ, ನಂತರ ಅಜ್ಜನ ಕಟ್ಟೆಯ ಬಳಿ ಬಂದು ತಪ್ಪಾಯಿತೆಂದು ಬೇಡಿಕೊಂಡ ನಂತರವೇ ಅವರು ತಲುಪಬೇಕಾದ ಜಾಗ

13

2
ADK CREATIVE
Subscribers
13.7K
Total Post
0
Total Views
3.6M
Avg. Views
54.6K
View Profile
This video was published on 2022-01-05 19:34:08 GMT by @ADK-Pictures on Youtube. ADK CREATIVE has total 13.7K subscribers on Youtube and has a total of 0 video.This video has received 13 Likes which are lower than the average likes that ADK CREATIVE gets . @ADK-Pictures receives an average views of 54.6K per video on Youtube.This video has received 2 comments which are higher than the average comments that ADK CREATIVE gets . Overall the views for this video was lower than the average for the profile.

Other post by @ADK Pictures