×

AMOGH SHAMBU FILMS “Making true for the dream's”'s video: Forever and ever in my heart and soul you will be there PuneethRajkumar anna AmoghShambu

@Forever and ever in my heart and soul you will be there #PuneethRajkumar anna | #AmoghShambu
ನಮ್ಮ ಭಾರತ ದೇಶದ ಮತ್ತು ನಮ್ಮ ಕರ್ನಾಟಕ ನಾಡಿನ ಗೌರವಾನ್ವಿತ ಜನರಿಗೆ ನನ್ನ ನಮಸ್ಕಾರಗಳು, ನನ್ನ ಅಚ್ಚುಮೆಚ್ಚಿನ ಹಾಗೂ ನನ್ನ ಗೌರವಾನ್ವಿತರಾದ ಶ್ರೀ ಡಾ. ರಾಜ್‍ಕುಮಾರ್ ಅಪ್ಪಾಜಿ ಸರ್ ಅವರ ಪಾದಗಳಿಗೆ ಮನಸ್ಪೂರ್ವಕವಾಗಿ ನಮಸ್ಕರಿಸುತ್ತೇನೆ, ನನ್ನ ತುಂಬು ಪ್ರೀತಿಯ ಅಣ್ಣರಾದ ಶ್ರೀ ಪುನೀತ್ ರಾಜ್‍ಕುಮಾರ್ ಅಣ್ಣನವರು ನನಗೆ ಸದಾಕಾಲವೂ ಸ್ಪೂರ್ತಿದಾಯಕರಾಗಿ ಹಾಗೂ ನನಗೆ ತುಂಬಾ ಪ್ರೇರಣೆಯನ್ನು ನೀಡಿದರು ಮತ್ತು ನನಗೆ ಆಶೀರ್ವಾದವನ್ನು ನೀಡಿದರು, ನಾನು ನನ್ನ ತುಂಬು ಪ್ರೀತಿಯ ಅಣ್ಣರಾದ ಶ್ರೀ ಪುನೀತ್ ರಾಜ್‍ಕುಮಾರ್ ಅಣ್ಣನವರನ್ನು ಅನೇಕ ಬಾರಿ ಭೇಟಿಯಾಗಿದ್ದೆ, ನಾನು ೧೬ ಡಿಸೆಂಬರ್ ೨೦೧೯ ರಲ್ಲಿ, ಸಂಜೆ ಸಮಯದಲ್ಲಿ ವೈಯಕ್ತಿಕವಾಗಿ ಭೇಟಿಯಾಗಿ, ನನ್ನನು ಪುನೀತ್ ರಾಜ್‍ಕುಮಾರ್ ಅಣ್ಣನವರು ಅವರ ಪೆರ್ಸನಲ್ ಕ್ಯಾಬಿನ್ ನಲ್ಲಿ ಅವರ ಜೊತೆಯಲ್ಲಿ ಕರೆದುಕೊಂಡು ಹೋದರು ಮತ್ತು ಅವರು ನನಗೆ ಕುರ್ಚಿಯ ಮೇಲೆ ಕುಳಿತುಕೊಳ್ಳಲು ಹೇಳಿ, ಮತ್ತು ಅವರು ಕುರ್ಚಿಯ ಮೇಲೆ ಕುಳಿತುಕೊಂಡರು, ನನಗೆ ಈ ಸಮಯದಲ್ಲಿ ತುಂಬಾನೇ ಏದುಸಿರು ಮತ್ತು ತುಂಬಾನೇ ಭಯದಿಂದ ಮಾತಾಡ್ತಾ ಇದ್ದೆ, ನನಗೆ ಇಂತಹ ಸಂದರ್ಭದಲ್ಲಿ ನನ್ನ ಪುನೀತ್ ರಾಜ್‍ಕುಮಾರ್ ಅಣ್ಣನವರು ನನಗೆ ತುಂಬಾನೇ ತುಂಬಾನೇ ಸಮಾಧಾನ ಮಾಡಿ, ಅಮೋಘ ಸಮಾಧಾನವಾಗಿ ಇರಿ ಎಂದು ಹೇಳಿ, ನನಗೆ ಕಾಫಿ ತಗೋಳ್ತೀರಾ ಅಥವಾ ಏನು ಬೇಕು ಎಂದು ಕೇಳಿದರು, ನಾನು ಆಗ ಅಣ್ಣ ಕಾಫಿ ಆಗಲೇ ಕೊಟ್ಟಿದ್ದರು, ಕ್ಕಾಫಿ ಕುಡಿದೆ ಅಣ್ಣ ನನಗೆ ಒಂದು ಹತ್ತು ನಿಮಿಷ ಸುಧಾರಿಸಿಕೊಳ್ಳಲು ಸಮಯ ಬೇಕು ಅಂತ ಕೇಳಿದೆ ಆಗ ಅಣ್ಣನವರು ಸಮಾಧಾನ ಮಾಡಿ, ನಿನ್ನ ಸಮಯವನ್ನು ತೆಗೆದುಕೊಳ್ಳುವಂತೆ ಹೇಳಿ ಹೇಳಿದರು ಮತ್ತು ನನಗೆ ತುಂಬಾನೆ ಪ್ರೀತಿಯಿಂದ ಮಾತಾಡಿಸಿದರು, ಅಮೋಘ ಶಂಭು ನೀವು ಬರಹಗಾರರು ಮತ್ತು ಚಿತ್ರಗಳನ್ನು ಮಾಡಿದಿರಾ ಅಂತ ಎಂದು ಕೇಳಿ ಪಟ್ಟಿದ್ದೀನಿ ಮತ್ತು ನಾನು ಬರೆದಿರುವಂತಹ ಕಥೆಗಳನ್ನು ಮತ್ತು ನನ್ನ ಕಿರು ಚಿತ್ರವನ್ನು ನೋಡುತ್ತೀನಿ ಎಂದು ಸ್ವತಃ ಪುನೀತ್ ರಾಜ್‍ಕುಮಾರ್ ಅಣ್ಣನವರು ಸ್ವತಹ ಅವರು ತಮ್ಮ ಐ ಪ್ಯಾಡಿನಲ್ಲಿ ನಲ್ಲಿ ನನ್ಮ ಯುಟ್ಯೂಬ್ ಚಾನೆಲ್ ನನ್ನು ಹೆಸರನ್ನು ಟೈಪ್ ಮಾಡಿ  ನೋಡಿ ಅನಂತರ ಅಮೋಘ ನಾನು ಮನೆಯಲ್ಲಿ ಕೂತ್ಕೊಂಡು ನೋಡ್ತೀನಿ ಅಂತ ಹೇಳಿದರು, ಅನಂತರ ನಾನು ಬರೆದಿದ್ದ ಸ್ನೇಹದ ಜೀವಿಗಳು ಕಥೆಯನ್ನು ತೋರಿಸಿ ಮತ್ತು ನನ್ನ ಹಲವಾರು ಸುದ್ದಿಯ ಪತ್ರಿಕೆಗಳಲ್ಲಿ ಬಂದಿರುವಂತಹ, ಆರ್ಟಿಕಲ್ ಪುಟವನ್ನು ತೋರಿಸಿ ಮತ್ತು ನನ್ನ ಸುದ್ದಿವಾಹಿನಿಯಲ್ಲಿ ಬಂದಿರುವಂತಹ ಇಂಟರ್ವ್ಯೂ ಗಳನ್ನು ತೋರಿಸಿದೆ, ಪುನೀತ್ ರಾಜ್‍ಕುಮಾರ್ ಅಣ್ಣನವರಿಗೆ ನನ್ನ ಕಥೆಗಳ ಬಗ್ಗೆ ಮತ್ತು ಚಲನಚಿತ್ರಗಳ ಯೋಚನೆಗಳ ಬಗ್ಗೆ ಮಾತಾಡಿದ್ದು, ನನಗೆ ಪುನೀತ್ ರಾಜ್‍ಕುಮಾರ್ ಅಣ್ಣನವರು ಅಮೋಘ, ನಮ್ಮ ರಾಜ್‍ಕುಮಾರ್ ಅಪ್ಪಾಜಿ ಅವರು, ನಮ್ಮ ಕುಟುಂಬವೂ ಯಾವಾಗಲೂ ಕೌಟುಂಬಿಕ ಕಥೆಗಳನ್ನು ಮತ್ತು ಮನೆಮಂದಿಯಲ್ಲಾ ಕುಳಿತು ನೋಡುವಂತಹ ಚಲನಚಿತ್ರವನ್ನು ಮಾಡುತ್ತಾ ಬಂದಿದ್ದೇವೆ, ನೀನು ನನಗೆ ಮುಂದಿನ ಬಾರಿ ಅದ್ಭುತವಾದ ಕಥೆಯನ್ನು ಮಾಡಿಕೊಂಡು ಬಂದು ಹಾಗೂ ಜೊತೆಯಲ್ಲಿ ಒಂದು ಸುಂದರವಾದ ಕಿರುಚಿತ್ರವನ್ನು ಮಾಡಿಕೊಂಡು ಬಾ ಎಂದು ಹೇಳಿದರು ಮತ್ತು ಈ ಸಂದರ್ಭದಲ್ಲಿ ನಾನು ನನ್ನ ಪುನೀತ್ ರಾಜ್‍ಕುಮಾರ್ ಅಣ್ಣನವರಿಗೆ ನಾನು ಖಂಡಿತವಾಗಿಯೂ ಅಣ್ಣ ನಾನು ನೀವು ಹೇಳಿದ ನೀವು ಹೇಳಿದ ಹಾಗೆ ಮಾಡಿಕೊಂಡು ಬರುತ್ತೇನೆ ಎಂದು ಹೇಳಿದೆ ಮತ್ತು ಈ ಸಂದರ್ಭದಲ್ಲಿ ನನ್ನ ಗೌರವಾನ್ವಿತರಾದ ಶ್ರೀ ಶಂಭು ತಿಳವಲ್ಲಿ ನನ್ನ ತುಂಬು ಪ್ರೀತಿಯ ತಂದೆಯವರು ಮತ್ತು ಪುನೀತ್ ರಾಜ್‍ಕುಮಾರ್ ಅಣ್ಣನವರು ದೂರವಾಣಿಯಲ್ಲಿ ಮಾತನಾಡಿದರು, ಇದೇ ಮೂರು ತಿಂಗಳ ಹಿಂದೆ ನಮ್ಮ ಹೆಮ್ಮೆಯ ಕಂಠೀರವ ಸ್ಟುಡಿಯೋದಲ್ಲಿರುವ ಡಾ. ರಾಜ್‍ಕುಮಾರ್ ಅಪ್ಪಾಜಿಯವರ ಸ್ಮಾರಕಕ್ಕೆ ಆಗಮಿಸಿದರು ಪುನೀತ್ ರಾಜ್‍ಕುಮಾರ್ ಅಣ್ಣನವರು ಇಂಥ ಸಂದರ್ಭದಲ್ಲಿ ನನ್ನ ತುಂಬು ಪ್ರೀತಿಯ ಗೋಲ್ಡನ್ ಸ್ಟಾರ್ ಶ್ರೀ ಗಣೇಶ್ ಅಣ್ಣ ಅವರ ಅಭಿನಯದ ಮತ್ತು ಸಿಂಪಲ್ ಸುನಿ ಅಣ್ಣ ಅವರ ಚಲನಚಿತ್ರ ನಿರ್ದೇಶನದ ಸಖತ್ ಚಿತ್ರೀಕರಣದ ಸಮಯದಲ್ಲಿ, ನನ್ನ ಗೌರವಾನ್ವಿತರಾದ ಶ್ರೀ ಪುನೀತ್ ರಾಜ್‍ಕುಮಾರ್ ಅಣ್ಣನವರು ಹಾಗೂ ನನ್ನ ಗೌರವಾನ್ವಿತರಾದ ಶ್ರೀ ಸಿಂಪಿಲ್ ಸುನಿ ಅಣ್ಣ ಅವರು ಇಬ್ಬರು ಜೊತೆಯಲ್ಲಿ ಮಾತನಾಡುತ್ತಿದ್ದರು ಮತ್ತು ಅನಂತರ ನಾನು ಪುನೀತ್ ರಾಜ್‍ಕುಮಾರ್ ಅಣ್ಣ ಅವರನ್ನು ಭೇಟಿಯಾಗಿ ಮಾತಾಡಿಸಿದೆ, ಆಗ ಪುನೀತ್ ರಾಜ್‍ಕುಮಾರ್ ಅಣ್ಣನವರು, ಈ ಸಿನೆಮಾದಲ್ಲಿ ಕೆಲಸ ಮಾಡುತ್ತಾ ಇದ್ದೀಯ ಅಂತ ಕೇಳಿದರು, ಆಗ ನಾನು ಹಾ ಅಣ್ಣ ಹೌದು ನಾನು ಸಿಂಪಿಲ್ ಸುನಿ ಅಣ್ಣ ಅವರ ಸಖತ್ ಸಿನಿಮಾದಲ್ಲಿ ನಾನಿಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದೆ ಮತ್ತೆ ಆಗ ನಾನು ನನ್ನ ಪುನೀತ್ ರಾಜಕುಮಾರ್ ಅಣ್ಣನವರಿಗೆ, ಅಣ್ಣ ಆದಷ್ಟು ಬೇಗ ನಾನು ಕಥೆಯನ್ನು ಬರೆದುಕೊಂಡು ಬರುತ್ತೇನೆ ಅಣ್ಣ, ನೀವು ಹೇಳಿದ ಹಾಗೆ ಆದಷ್ಟು ಬೇಗನೆ ಒಂದು ಕಿರುಚಿತ್ರವನ್ನು ಮಾಡಿಕೊಂಡು ಬರುತ್ತೇನೆ ಅಂತ ಹೇಳಿದೆ, ಆಗ ಪುನೀತ್ ರಾಜ್‍ಕುಮಾರ್ ಅಣ್ಣನವರು ಸರಿ ಖಂಡಿತವಾಗಿ ಮಾಡಿಕೊಂಡು ಮನೆಗೆ ಬಾ ಅಂತ ಹೇಳಿದರು, ಸದಾಕಾಲವೂ ಎಂದೆಂದಿಗೂ ನನ್ನ ತುಂಬು ಹೃದಯದಿಂದ ಪ್ರೀತಿ, ನನ್ನ ಬೆಂಬಲ, ನನ್ನ ಗೌರವ ಸದಾ ಎಂದೆಂದಿಗೂ ಜೊತೆಯಲ್ಲಿ ನಿಮ್ಮೊಂದಿಗೆ ಅಣ್ಣ. ನನ್ನ ತುಂಬು ಪ್ರೀತಿಯ ಶ್ರೀ ಪುನೀತ್ ರಾಜ್‍ಕುಮಾರ್ ಅಣ್ಣನವರಿಗೆ ನನ್ನ ಮನಸ್ಪೂರ್ವಕವಾಗಿ ಶತಕೋಟಿ ಧನ್ಯವಾದಗಳು. ನನ್ನ ದುಃಖ ಮತ್ತು ನನ್ನ ಮನಸಿನಲ್ಲಿ ಆಗುತ್ತಿರುವ ಅತಿಯಾದ ನೋವನ್ನು ವ್ಯಕ್ತಪಡಿಸಲು ಪದಗಳೇ ಸಿಗುತ್ತಿಲ್ಲ, ನನ್ನ ತುಂಬು ಪ್ರೀತಿಯ ಹಾಗೂ ನನ್ನ ಅಚ್ಚುಮೆಚ್ಚಿನ ಪವರ್ ಸ್ಟಾರ್ ಶ್ರೀ ಪುನೀತ್ ರಾಜ್‍ಕುಮಾರ್ ಅಣ್ಣನವರು ಇನ್ನಿಲ್ಲ ಎನ್ನುವುದನ್ನು ನಂಬಲು ಸಾಧ್ಯವೇ ಆಗುತ್ತಿಲ್ಲ. ನನ್ನ ತುಂಬು ಪ್ರೀತಿಯ ಶ್ರೀ ಪುನೀತ್ ರಾಜ್‍ಕುಮಾರ್ ಅಣ್ಣನವರ ಹಠಾತ್ ಅಗಲಿಕೆಯ ಸುದ್ದಿ ಅತ್ಯಂತ ಆಘಾತವನ್ನು ನನಗೆ ತಂದಿದೆ. ಈ ತುಂಬಾ ದುಃಖಕರವಾದ ಸಮಯದಲ್ಲಿ ನಾನು ಕೂಡ ನನ್ನ ಗೌರವಾನ್ವಿತರಾದ ಡಾ. ರಾಜ್‍ಕುಮಾರ್ ಅಪ್ಪಾಜಿ ಸರ್ ಅವರ ಕುಟುಂಬದಲ್ಲಿ ಭಾಗಿಯಾಗಿದ್ದೇನೆ. ಸದಾ ಎಂದೆಂದಿಗೂ ನನ್ನ ಜೀವನದ ಪ್ರತಿಯೊಂದು ಕ್ಷಣವು, ಸದಾಕಾಲವೂ ನನ್ನ ಹೃದಯದ ಅಂತರಾಳದಲ್ಲಿ ಎಂದೆಂದಿಗೂ ಅಜರಾಮರವಾಗಿ, ಸದಾಕಾಲ ನೀವು ಸುಂದರವಾಗಿ ಜೀವಂತ ಪುನೀತ್ ರಾಜ್‍ಕುಮಾರ್ ಅಣ್ಣ, ನಿಮ್ಮ ಮಹಾಕಲಾವಂತಿಕೆ, ಅದ್ಭುತವಾದ ಪ್ರತಿಭೆ, ಸುಂದರವಾದ ವ್ಯಕ್ತಿತ್ವವನ್ನು ಎಂದೂ ಮರೆಯಲಾಗದು. ನಮ್ಮ ಭಾರತ ದೇಶದ ಹೆಮ್ಮೆಯ, ನಮ್ಮ ಕರ್ನಾಟಕ ನಾಡಿನ ಹೆಮ್ಮೆಯ, ನಮ್ಮ ಕನ್ನಡದ ಶಕ್ತಿ, ನಮ್ಮ ಕರುನಾಡ ಕೀರ್ತಿ. ನನ್ನ ಅಪ್ಪು ಅಣ್ಣನವರು, ಸುಂದರವಾದ ನಟನಾಗಿ, ಹೆಮ್ಮೆಯ ನಿರ್ಮಾಪಕನಾಗಿ, ಅದ್ಭುತವಾದ ಗಾಯಕನಾಗಿ ಕಲಾದೇವಿಗೆ ಸಲ್ಲಿಸಿದ ಸೇವೆ ಸದಾ ನಾನು ನನ್ನ ಜೀವನದಲ್ಲಿ ಸ್ಮರಿಸುತ್ತೇನೆ, ಆದರೆ ನೀವು ನಮ್ಮನ್ನೆಲ್ಲ ಬಿಟ್ಟು ಅಗಲಿದ್ದೀರ ಎನ್ನುವ ಸುದ್ದಿ ನಿಜಕ್ಕು ಬರ ಸಿಡಿಲು ಬಡಿದಂತಾಗಿದೆ, ನನಗೆ ಈ ಕ್ಷಣವು ನಂಬುವುದಕ್ಕೆ ಸಾಧ್ಯವಾಗುತ್ತಿಲ್ಲ, ನನ್ನ ತುಂಬು ಪ್ರೀತಿಯ ಶ್ರೀ ಪುನೀತ್ ರಾಜ್‍ಕುಮಾರ್ ಅಣ್ಣನವರ ಸುಂದರವಾದ ಆತ್ಮಕ್ಕೆ ಶಾಂತಿಯನ್ನು ಸ್ವರ್ಗದಲ್ಲಿ ಕರುಣಿಸಲಿ ಎಂದು ನಾನು ನನ್ನ ಶಿವ ದೇವರಲ್ಲಿ ನನ್ನ ಆತ್ಮಸಾಕ್ಷಿಯಾಗಿ ಪ್ರಾರ್ಥಿಸುತ್ತೇನೆ, ನನ್ನ ಗೌರವಾನ್ವಿತರಾದ ಡಾ. ರಾಜ್‍ಕುಮಾರ್ ಅಪ್ಪಾಜಿ ಸರ್ ಅವರ ಎಲ್ಲಾ ಗೌರವಾನ್ವಿತ ಕುಟುಂಬಸ್ಥರಿಗೆ ಹಾಗೂ ಅವರ ಗೌರವಾನ್ವಿತ ಕೋಟ್ಯಾಂತರ ಅಭಿಮಾನಿಗಳಿಗೆ ದುಃಖವನ್ನು ಭರಿಸುವ ಶಕ್ತಿ ಕೊಡಲಿ ಎಂದು ನಾನು ನನ್ನ ಶಿವ ದೇವರಲ್ಲಿ ಮನಸ್ಪೂರ್ವಕವಾಗಿ ಪ್ರಾರ್ಥಿಸುತ್ತೇನೆ, ಧನ್ಯವಾದಗಳು. - ನಿಮ್ಮ ಪ್ರೀತಿಯ ಅಮೋಘ ಶಂಭು.

6

0
AMOGH SHAMBU FILMS “Making true for the dream's”
Subscribers
821
Total Post
194
Total Views
9.7K
Avg. Views
142.4
View Profile
This video was published on 2021-11-01 15:42:26 GMT by @AMOGH-FILMS on Youtube. AMOGH SHAMBU FILMS “Making true for the dream's” has total 821 subscribers on Youtube and has a total of 194 video.This video has received 6 Likes which are higher than the average likes that AMOGH SHAMBU FILMS “Making true for the dream's” gets . @AMOGH-FILMS receives an average views of 142.4 per video on Youtube.This video has received 0 comments which are lower than the average comments that AMOGH SHAMBU FILMS “Making true for the dream's” gets . Overall the views for this video was lower than the average for the profile.

Other post by @AMOGH FILMS