×

Mangalore-Samachar's video: 24th Kannada Sahitya Sammelan 24

@24th Kannada Sahitya Sammelan, 24ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆ ಕಂಡಿತು..
24ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಡಾಕ್ಟರ್ ಎಂ. ಪ್ರಭಾಕರ ಜೋಶಿ ಯವರ ಸಮ್ಮೇಳನಾಧ್ಯಕ್ಷ ತೆಯಲ್ಲಿ ದೀಪ ಬೆಳಗಿ ಶಾರದಾ ವಿದ್ಯಾಲಯ ಆವರಣದಲ್ಲಿ ದಿನಾಂಕ 12ನೇ ಫೆಬ್ರವರೀ 2021ರಂದು ಉದ್ಘಾಟನೆ ಕಂಡಿತು.. ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಮೂರು ದಿನಗಳ ಕಾಲ ಆಯೋಜಿಸಲಾಗಿತ್ತು. ಆರಂಭದಲ್ಲಿ ಧ್ವಜಾರೋಹಣ ನೆರವೇರಿಸಿ, ಪುಸ್ತಕ ಪ್ರದರ್ಶನ ಮಳಿಗೆ ಉದ್ಘಾಟನೆ, ಚಿತ್ರ ಪ್ರದರ್ಶನ ಚಾವಡಿ ಉದ್ಘಾಟನೆ ಬಳಿಕ ಸಮಾರಂಭದ ಉದ್ಘಾಟನೆ ಕಾರ್ಯಕ್ರಮ, ಪ್ರೊಫೆಸರ್ ಎಂ.ಬಿ.ಪುರಾಣಿಕ್ ಸರ್ವರನ್ನು ಸ್ವಾಗತಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ರಾದ ಶ್ರೀ ಪ್ರದೀಪ್ ಕುಮಾರ್ ಕಲ್ಕೂರ ರವರು ಪ್ರಾಸ್ತಾವಿಕವಾಗಿ ಶುಭ ನುಡಿಗಳನ್ನು ಆಡಿದರು. ಪ್ರೊಫೆಸರ್ ವಿವೇಕ್ ರೈ ಮೂವರು ಉದ್ಘಾಟನಾ ಶುಭ ನುಡಿಗಳನ್ನು ಆಡಿದರು. ನಂತರ ವಿದ್ವತ್ ಸಾಮಾನುಗಳು, ಕನ್ನಡ ಸಿರಿ ಗೌರವ ಪ್ರದಾನ ಮಾಡಲಾಯಿತು. ವೇದಿಕೆಯಲ್ಲಿ ದಿವ್ಯ ಉಪಸ್ಥಿತಿಯನ್ನಿತ್ತು ಶ್ರೀ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಆಶೀರ್ವಚನ ನೀಡಿದರೆ, ಹರೇಕಳ ಹಾಜಬ್ಬ ದೀಪ ಬೆಳಗಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಅತಿವಂದನೀಯ ಡಾ.ಪೀಟರ್ ಪಾವ್ಲ್ ಸಲ್ಡಾನಾ ವಿದ್ವತ್ ಸಮ್ಮಾನ ನೀಡಿದರು. ಕನ್ನಡ ಸಿರಿ ಗೌರವ ಪ್ರದಾನ ನನ್ನು ಮಹಾಬಲೇಶ್ವರ ಎಂ.ಎಸ್ ಕರ್ನಾಟಕ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರು. ಪುಸ್ತಕ ಬಿಡುಗಡೆ ಯನ್ನು ಧರ್ಮದರ್ಶಿ ಹರಿಕೃಷ್ಣ ಪುನರೂರು, ಇನ್ನಿತರರು ಉಪಸ್ಥಿತರಿದ್ದರು. Mangalore Samachar

1

0

Other post by @Mangalore Samachar