@Mudbidre Laxsha deepotsava, ಸಾವಿರ ಕಂಬದ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಲೋಕಕಲ್ಯಾಣಾರ್ಥ ಲಕ್ಷದೀಪೋತ್ಸವ ಸಂಪನ್ನ.
ಮೂಡಬಿದರೆ ಸಾವಿರ ಕಂಬದ ಬಸದಿಯಲ್ಲಿ ದಿನಾಂಕ 26 ಜನವರಿ 2021 ರಂದು ಸಂಜೆ ಲೋಕಕಲ್ಯಾಣಾರ್ಥ ಭಗವಾನ್ ಸಾವಿರದೆಂಟು ಚಂದ್ರನಾಥ ಸ್ವಾಮಿಗೆ ಶರ್ಕರ ಅಭಿಷೇಕ, ಕ್ಷೀರಾಭಿಷೇಕ, ಚಂದನದ ಅಭಿಷೇಕ, ಶ್ರೀಗಂಧದ ಅಭಿಷೇಕ, ನೀರಿನ ಅಭಿಷೇಕಗಳನ್ನು ಮಾಡಿ ಅರ್ಚಿಸಿ, ಹಣತೆಗಳಿಂದ ಅಲಂಕರಿಸಿ ಮಹಾಮಂಗಳಾರತಿ ಜರುಗಿತು.
ಆರಂಭದಲ್ಲಿ ದಿವ್ಯ ಸಾನಿಧ್ಯವನ್ನು ಆಶೀರ್ವಚನವನ್ನು ಪರಮಪೂಜ್ಯ 108 ದಿವ್ಯ ಸಾಗರ ಮುನಿ ಮಹಾರಾಜ್ ರವರು ನೀಡಿ,
ಪಾವನ ಉಪಸ್ಥಿತಿ ಮಾರ್ಗದರ್ಶನವನ್ನು ಪರಮಪೂಜ್ಯ ಜಗದ್ಗುರು ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮಿಗಳು ನೀಡಿ,
ದಿವ್ಯ ಉಪಸ್ಥಿತಿಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಗಳಾದ ಡಾಕ್ಟರ್ ಡಿ. ವೀರೇಂದ್ರ ಹೆಗ್ಗಡೆಯವರು ಇತ್ತು ಶುಭ ಸಂದೇಶವನ್ನು ನೀಡಿದರು.
ತದನಂತರದಲ್ಲಿ ಶ್ರೀ ಗಳು ಶಾಲು ಹಾರ ಹಣ್ಣು-ಹಂಪಲು ನೀಡಿ ಗೌರವಿಸಿದರು.
ಈ ಸಂದರ್ಭ ಜಿನ ಭಜನೆಗಳನ್ನು ಶ್ರೀಮತಿ ನಿರೀಕ್ಷಾ ಜೈನ್ ಅವರು ಸುಶ್ರಾವ್ಯವಾಗಿ ಹಾಡಿದರು.
ವಿಶೇಷ ಸೇವೆಯನ್ನು ಮಾಜಿ ಮಂತ್ರಿಗಳಾದ ಶ್ರೀ ಅಭಯಚಂದ್ರ ಜೈನ್ ಅವರು ವಹಿಸಿ ನೆರವೇರಿಸಿದರು.
ವಿಶೇಷ ಉಪಸ್ಥಿತಿಯಲ್ಲಿ ಮುಲ್ಕಿ ಸೀಮೆ ಅರಸರು, ಶ್ರೀಮತಿ ಹೇಮಾವತಿ ವಿ. ಹೆಗ್ಗಡೆ, ಶ್ರೀಮತಿ ಸುಪ್ರಿಯ ಹರ್ಷೇಂದ್ರ ಕುಮಾರ್, ಡಾಕ್ಟರ್ ಬಿ. ಯಶೋವರ್ಮ ಮತ್ತಿತರರು ಭಾಗವಹಿಸಿದ್ದರು. ನೂರಾರು ಮಂದಿ ಶ್ರಾವಕ ಶ್ರಾವಕಿಯರು, ನಾಗರಿಕರು ಉಪ ಸ್ಥಿತಿಯಲ್ಲಿದ್ದು, ಪುಣ್ಯ ಕಾರ್ಯದಲ್ಲಿ ತೊಡಗಿಕೊಂಡರು.
Mangalore Samachar
Mangalore-Samachar's video: Mudbidre Laxsha deepotsava
20
3