×

Mangalore-Samachar's video: Southadka Mudappa Story 108

@Southadka Mudappa Story, ಶ್ರೀ ಕ್ಷೇತ್ರ ಸೌತಡ್ಕ ಶ್ರೀದೇವರ ಸನ್ನಿಧಿಯಲ್ಲಿ 108 ಕಾಯಿಹೋಮ , ಮೂಡಪ್ಪ ಸೇವೆ ಸಂಪನ್ನ
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪ್ರಸಿದ್ಧ ಸೌತಡ್ಕ ಯಾತ್ರಾ ಕ್ಷೇತ್ರ ಶ್ರೀ ಮಹಾಗಣಪತಿ ಸನ್ನಿಧಿಯಲ್ಲಿ ವರ್ಷಂಪ್ರತಿಯಂತೆ ಮಾಘ ಶುದ್ಧ ಚೌತಿಯಂದು ದಿನಾಂಕ 15 ಫೆಬ್ರವರಿ 2021 ಸೋಮವಾರ ದಂದು ಬ್ರಹ್ಮಶ್ರೀ ವೇದಮೂರ್ತಿ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ, ಮೂಡಪ್ಪ ಸೇವಾ ಕಾರ್ಯಕ್ರಮಗಳು ಸಂಭ್ರಮದಿಂದ ಸಂಪನ್ನಗೊಂಡವು. ಈ ಸಂದರ್ಭ 108 ಕಾಯಿ ಗಣಹೋಮ, ಶ್ರೀಮಹಾಗಣಪತಿ ದೇವರಿಗೆ ಅಥರ್ವಶೀರ್ಷ ಪಾರಾಯಣದೊಂದಿಗೆ ಹಾಲು, ಮೊಸರು, ಜೇನು, ಸಕ್ಕರೆ, ಬಾಳೆಹಣ್ಣು, ನೀರಿನಿಂದ ಮಹಾಭಿಷೇಕ ಸಂಪನ್ನಗೊಂಡಿತು. ನಂತರದಲ್ಲಿ ಹತ್ತಾರು ಬಗೆಯ ಹೂವುಗಳಿಂದ ಹಣ್ಣುಗಳಿಂದ ಶ್ರೀ ದೇವರಿಗೆ ಅಲಂಕಾರ ನಡೆಯಿತು. ತರುವಾಯ ಪಂಚಕಜ್ಜಾಯ, ಅಪ್ಪ, ಹಣ್ಣು-ಹಂಪಲು ಗಳಿಂದ ಮಹಾ ನೈವೇದ್ಯ ಸಮರ್ಪಣೆ ನೆರವೇರಿ, ಮಹಾಮಂಗಳಾರತಿ ಜರುಗಿತು. ಬಳಿಕ ಅನ್ನಪೂರ್ಣೆಯ ಪ್ರತೀಕವಾಗಿ ಅನ್ನ ಬ್ರಹ್ಮನನ್ನು ಅಲಂಕಾರಗೊಳಿಸಿ ಪೂಜಿಸಲಾಯಿತು. ಭಕ್ತ ವರ್ಗಕ್ಕೆ ಮಹಾ ಅನ್ನದಾನವು ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕಾರ್ಯ ನಿರ್ವಹಣಾಧಿಕಾರಿಗಳಾದ ಶ್ರೀ ಪವಾಡೆಪ್ಪ ದೊಡ್ಡಮನಿ ಯವರು ದೀಪ ಬೆಳಗಿಸಿ ಭಜನಾ ಕಾರ್ಯಕ್ರಮವನ್ನು ಚಾಲನೆ ಗೊಳಿಸಿ ಶುಭ ನುಡಿಗಳನ್ನಾಡಿದರು. ಸಂಜೆ ಅರ್ಚಕ ವರ್ಗದಿಂದ ಶ್ರೀ ದೇವರ ಸನ್ನಿಧಿಯಲ್ಲಿ ಕಬ್ಬಿನ ಬೇಲಿಯನ್ನು ರಚಿಸಿ, ಸನ್ನಿಧಾನವನ್ನು ಫಲ ಪುಷ್ಪಗಳಿಂದ ಶೃಂಗಾರಗೊಳಿಸಿ, ತಂತ್ರಿಗಳಾದ ಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ವರು ತಾಂತ್ರಿಕವಾಗಿ ಶ್ರೀ ದೇವರನ್ನು ಅರ್ಚಿಸಿ, ಶ್ರೀ ದೇವರ ಎದುರಿಗೆ ಕಾಯಿಯಲ್ಲಿ ತುಪ್ಪ ದೀಪ ಹಚ್ಚಿ, ಪಂಚಕಜ್ಜಾಯ, ಹಣ್ಣುಹಂಪಲುಗಳನ್ನು ಎಲೆಗಳಲ್ಲಿ ಬಡಿಸಿ, ಸಮರ್ಪಿಸಿ, ಮೂಡಪ್ಪ ಸೇವೆ ಯ, ರಂಗ ಪೂಜೆಯ ಸಂಕಲ್ಪ ಮಾಡಿ ನಂತರ ಕಬ್ಬಿನ ಬೇಲಿಯ ಒಳಗೆ ಬುಟ್ಟಿಗಳಲ್ಲಿ ತುಪ್ಪದಲ್ಲಿ ಕಾಯಿಸಿದ ಅಕ್ಕಿಯ ಹಿಟ್ಟಿನ ಅಪ್ಪಗಳನ್ನು ಅಭಿಷೇಕ ಮಾಡಲಾಯಿತು. ಹೀಗೆ ಶ್ರೀ ದೇವರನ್ನು ಅಪ್ಪ ಗಳಿಂದ ಮುಚ್ಚುವಂತೆ ಸುರಿಸಲಾಯಿತು. ಮೂಡಪ್ಪ ಸೇವೆ ಎಂದರೆ ಶ್ರೀ ದೇವರ ಸುತ್ತ ಕಬ್ಬಿನ ಜಲ್ಲೆಗಳಿಂದ ಬೇಲಿಯನ್ನು ರಚಿಸಿ, ಅದರೊಳಗೆ ತೆಂಗಿನಕಾಯಿ ಅಕ್ಕಿಯ ಹಿಟ್ಟನ್ನು ತುಪ್ಪದಿಂದ ಕರಿದು ಮಾಡಿದ ಅಪ್ಪ ಗಳನ್ನು ಸುರಿಸಿ ಮುಚ್ಚುವುದು ಆಗಿದೆ. ನಂತರ ಮಹಾ ನೇವೇದ್ಯ ಸಮರ್ಪಿಸಿ, ಸಹಸ್ರಾರು ಭಕ್ತರ ಸಮ್ಮುಖದಲ್ಲಿ ರಂಗಪೂಜೆ, ಮಹಾ ಮಂಗಳಾರತಿಗಳು ಜರುಗಿದವು. ಭಕ್ತ ವರ್ಗಕ್ಕೆ ತೀರ್ಥ, ಪ್ರಸಾದ, ಅಪ್ಪ ಗಳನ್ನು ಪಂಚಕಜ್ಜಾಯ ವನ್ನು ಅನ್ನದಾನವನ್ನು ಮಾಡಲಾಯಿತು. ಹಲವಾರು ಭಜನಾ ಮಂಡಳಿಗಳಿಂದ ಭಜನೆ ನಡೆದು ರಾತ್ರಿ ಪೂಜೆಯ ಬಳಿಕ ಯಕ್ಷಗಾನ ಕಾರ್ಯಕ್ರಮವು ನಡೆಯಿತು. ಬೆಳಗಿನಿಂದ ತಡ ರಾತ್ರಿಯ ತನಕ ಜರುಗಿದ ಕಾರ್ಯಕ್ರಮದಲ್ಲಿ ಆಡಳಿತಾಧಿಕಾರಿಗಳಾದ ಶ್ರೀ ಮಹೇಶ್ ಜೆ, ಪುತ್ತೂರು ಅಸಿಸ್ಟೆಂಟ್ ಕಮಿಷನರ್, ಬೆಂಗಳೂರಿನ ವಿವಿಧ ಸೇವಾರ್ಥಿಗಳು, ಭಕ್ತವರ್ಗ, ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು. Mangalore Samachar

16

0

Other post by @Mangalore Samachar